Saturday, February 27, 2010

ನಾನೆಲ್ಲೇ ಹೋದರೂ......!?: ನನ್ನವನ ಹುಡುಕಾಟದಲ್ಲಿ...?!

ನಾನೆಲ್ಲೇ ಹೋದರೂ......!?: ನನ್ನವನ ಹುಡುಕಾಟದಲ್ಲಿ...?!

1 comment:

  1. ಪ್ರೇಮ

    .............

    ಪ್ರೇಮ ಯಾವಾಗ ನಿಮಗೆ

    ಸನ್ನೆ ಮಾಡಿ ಕರೆಯುವುದೋ ಆಗ

    ಅದನ್ನು ಹಿಂಬಾಲಿಸಿರಿ.

    ಅದರ ದಾರಿಯು ಕಟಿಣವೂ ಕಡಿದಾಗಿದ್ದರೂ

    ಯಾವಾಗ ಅದು

    ತನ್ನ ಪಕ್ಕ ಪಸರಿಸುವುದೋ ಆಗ

    ಅದರಲ್ಲಿ ಒಂದಾಗಿರಿ ಅದರ ಪಕ್ಕದಲಿ

    ಕ್ರೂರವಾದ ಖಡ್ಗ ಅಡಗಿದ್ದು

    ಅದು ನಿಮ್ಮನ್ನು ಗಾಯಗೊಳಿಸಬಹುದಾದರೂ

    ಅದು ನಿಮ್ಮೊಡನೆ ನುಡಿದಾಗ

    ಅದರ ನುಡಿಗಳಲ್ಲಿ ನಂಬಿಕೆ ಇಡಿರಿ.

    ಅದರ ದನಿ, ಉತ್ತರದ ಗಾಳಿ

    ಉದ್ಯಾನವನ್ನು ಹಾಳು ಗೈಯುವಂತೆ

    ನಿಮ್ಮ ಕನಸನ್ನು ಚಿನ್ನ, ವಿಚ್ಚಿನ್ನ ಮಾಡಬಹುದು

    ಏಕೆಂದರೆ, ಪ್ರೇಮವು ನಿಮ್ಮನ್ನು

    ಪಟ್ಟಕ್ಕೇರಿಸಬಲ್ಲಂತೆ

    ಶೂಲಕ್ಕೆರಿಸಲೂ ಬಹುದು.



    "ಅದು ನಿಮ್ಮನ್ನು ಎತ್ತರಿಸಬಲ್ಲನಂತೆ

    ಕತ್ತರಿಸಲೂ ಬಲ್ಲದು".

    ಪ್ರೇಮವು ನಿಮ್ಮ ಎತ್ತರಕ್ಕೇರಿ

    ರವಿಯ ಹೊಂಬೆಳಕಿನಲಿ

    ಅಲ್ಲಾಡುತ್ತಿರುವ ನಿಮ್ಮ ಕೋಮಲ

    ಕೊಂಬೆಗಳನ್ನು ಮುದ್ದಾಡಿ

    ರಮಿಸಬಲ್ಲಂತೆ ಅದು ಕೆಳಗೆ

    ಆಳಕ್ಕಿಳಿದು ಬೇರಿನ ಹೊರಗೂ

    ತಲುಪಿ, ನೆಲದಲ್ಲಿ ಗಟ್ಟಿ ಮುಟ್ಟಾಗಿ

    ಇಳಿದ ಬೇರುಗಳನ್ನು ಅಲುಗಾಡಿಸಿ ಬಿಡಬಲ್ಲದು.



    ಧಾನ್ಯದ ಮೆದೆಗಳನ್ನು ಎತ್ತಿಕೊಳ್ಳುವ ಒಕ್ಕಲಿಗಂತೆ

    ಅದು ನಿಮ್ಮನ್ನು ತನ್ನ ಎದೆಗೆ ಅವುಚಿಕೊಳ್ಳುವುದು

    ಕಾಳುದುರುವಂತೆ ಅದು ನಿಮ್ಮನ್ನು ಒಡೆಯುವುದು

    ಒಟ್ಟು ಹಾರುವಂತೆ ನಿಮ್ಮನ್ನು ತೂರುವುದು

    ಬೆಳ್ಳಗಾಗುವಂತೆ ಬೀಸುವುದು

    ಒಗ್ಗಿ ಬರುವಂತೆ ನಾದುವುದು

    ಆ ಬಳಿಕ ತನ್ನ ಅಗ್ನಿಯಲಿ ಬೇಯಿಸಿ,

    ಪ್ರಭುವಿನ ಭೋಜನಕ್ಕಾಗಿ ನಿಮ್ಮನ್ನು

    ನೈವೇಧ್ಯವಾಗಿಸುವುದು. ಪ್ರೇಮವು

    ಇದೆಲ್ಲಾ ಸಂಸ್ಕಾರಗಳನು ನಿಮಗಾಗಿಸಿ

    ನೀವು ನಿಮ್ಮ ಹೃದಯ ರಹಸ್ಯಗಳನ್ನು

    ತಿಳಿದು ಕೊಳ್ಳುವಂತೆ ಮತ್ತು ಆ ತಿಳಿ

    ಬೆಳಕಿನಲ್ಲಿ ಜೀವನದ ಹೃದಯದ

    ಅಂಶವೇ ನೀವಾಗುವಂತೆ ಮಾಡುವುದು

    ಆದರೆ ನೀವು ಭಯಗೊಂಡು ಕೇವಲ

    ಪ್ರೇಮದ ಶಾಂತಿ ಸುಖಗಳನಷ್ಟೇ ಬಯಸುತ್ತಿದ್ದಾರೆ.



    ಮರ್ಯಾದೆಯಿಂದ ಮೈಮುಟ್ಟಿಕೊಂಡು ಅದರ ಕಣದಿಂದ ಹೊರಬರುವುದೆ ಒಳಿತು.

    ಆಮೇಲೆ ಮನಸೋ ಇಚ್ಛೆಯಾಗಿ ಅಳಬಾರದ ನಗಬಾರದ ಋತು ಹೀನ ಒಳ್ಳೆಯದು

    ಲೋಕದಲಿ ಬಂದು ನಿಂದು ನೀವು ನಗಲೂಬಹುದು ಅಳಲೂಬಹುದು

    ಪ್ರೇಮವು ತನ್ನನ್ನುಳಿದು ಏನನ್ನು ಈಯದು ತನ್ನನ್ನು ಉಳಿದು ಏನನ್ನು ಕೊಳ್ಳದು

    ಪ್ರೇಮವು ಸ್ವಾದೀನ ಮಾಡಿಕೊಳ್ಳದು; ಅಧೀನವೂ ಆಗಲಾರದು ಏಕೆಂದರೆ ಪ್ರೇಮದ

    ಪರಿಪೂರ್ಣತೆ ಪ್ರೇಮದಲ್ಲಿಯೇ ಇದೆ. ನೀವು ಪ್ರೇಮ ಪೂರಿತಲಾದಾಗ ದೇವರು

    ನನ್ನ ಹೃದಯದಲ್ಲಿದ್ದಾನೆ ಎನ್ನಬಾರದು; ದೇವರ ಹೃದಯದಲ್ಲಿ ನಾನಿದ್ದೇನೆ ಎನ್ನಬೇಕು...



    ಸ್ವೇಚ್ಛೆಯಿಂದ ಹಾಗೂ ಆನಂದದಿಂದ

    ನೆತ್ತರ ಹರಿಸುವುದು ಗರಿಯೊಡೆದ ಹೃದಯದಿಂದ

    ಬೆಳಗಿನಲ್ಲೆದ್ದು ಪ್ರೇಮದ ಇನ್ನೊಂದು ದಿನ

    ಬಂದುದ್ದಕ್ಕಾಗಿ ಕೃತಜ್ಞರಾಗುವುದು.

    ನಡು ಹಗಲಿನಲಿ ವಿಶ್ರಾಂತಿಗೊಳ್ಳುತ್ತಾ ಪ್ರೇಮದ

    ಆನಂದ ಲಹರಿಯಲ್ಲಿ ಧ್ಯಾನ ಮಗ್ನರಾಗುವುದು

    ನಲುವಿನಲಿ ತೇಲಾಡುತ್ತಾ ಸಂಜೆಗೆ ಮನೆಗೆ

    ಮರಳುವುದು ಆಮೇಲೆ ಜೀವದ ನಲ್ಲೆಗಾಗಿ

    ಹೃದಯದಲಿ ಪ್ರಾರ್ಥನೆ ಮಾಡುತ್ತಾ ಅವಳ

    ನೆನಪನ್ನು ಗುನುಗುನುನಿಸುತ್ತಾ

    ಮಲಗುವುದು.





    · ಖಲೀಲ್ ಗೀಬ್ರಾನ್

    ReplyDelete